Posts

Showing posts with the label ಶಿಕ್ಷಣದ ಗುರಿಗಳು

ಮನೋವಿಜ್ಞಾನದಲ್ಲಿ ಶಿಕ್ಷಣದ ಗುರಿಗಳು

Image
  ಪೀಠಿಕೆ   ವಿದ್ಯಾಭ್ಯಾಸ ಎಂಬುದು ಕೇವಲ ಪಾಠ ಹೇಳುವಿಕೆಯಿಂದಲೇ ಸೀಮಿತವಲ್ಲ. ಅದು ವ್ಯಕ್ತಿಯ ಬುದ್ಧಿ, ಭಾವನೆ, ನಡವಳಿಕೆ, ಕೌಶಲ್ಯಗಳ ಸರ್ವತೋಮುಖ ಬೆಳವಣಿಗೆಗಾಗಿ ಮಾಡಲ್ಪಡುವ ಕ್ರಿಯೆಯಾಗಿದೆ. ಶಿಕ್ಷಣದ ಗುರಿಗಳನ್ನು ನಿರ್ಧರಿಸುವಲ್ಲಿ ಶೈಕ್ಷಣಿಕ ಮನೋವಿಜ್ಞಾನ ಮಹತ್ವಪೂರ್ಣ ಪಾತ್ರವಹಿಸುತ್ತದೆ. ಮಾನವನ ಮನಸ್ಸಿನ ಕಾರ್ಯವಿಧಾನಗಳನ್ನು ತಿಳಿದು, ಶಿಕ್ಷಣದ ಉದ್ದೇಶಗಳನ್ನು ರೂಪಿಸಲಾಗುತ್ತದೆ. ಇದರಲ್ಲಿ ಅತ್ಯಂತ ಪ್ರಮುಖವಾಗಿರುವುದೇ ಜ್ಞಾನಾತ್ಮಕ ಗುರಿಗಳು (Cognitive Objectives) ಜ್ಞಾನಾತ್ಮಕ ಗುರಿಗಳ ಅರ್ಥ ಜ್ಞಾನಾತ್ಮಕ ಗುರಿಗಳು ವಿದ್ಯಾರ್ಥಿಯ ಅರಿವು, ತಿಳುವಳಿಕೆ, ಅನ್ವಯ, ವಿಶ್ಲೇಷಣೆ, ಸಂಶ್ಲೇಷಣೆ ಮತ್ತು ಮೌಲ್ಯಮಾಪನ ಚಟುವಟಿಕೆಗಳಿಗೆ ಸಂಬಂಧಿಸಿದ ಗುರಿಗಳಾಗಿವೆ. ಈ ಗುರಿಗಳು ವಿದ್ಯಾರ್ಥಿಯ ಬೌದ್ಧಿಕ ಬೆಳವಣಿಗೆಗೆ ದಾರಿ ಮಾಡಿಕೊಡುತ್ತವೆ. ಶಿಕ್ಷಣ ತಜ್ಞ ಬ್ಲೂಮ್ (Bloom) ಅವರು ಈ ಜ್ಞಾನಾತ್ಮಕ ಗುರಿಗಳನ್ನು ಕ್ರಮಬದ್ಧವಾಗಿ ಹೀಗಾಗಿ ವಿಂಗಡಿಸಿದ್ದಾರೆ:  1. ಜ್ಞಾನ (Knowledge) ಇದು ಪ್ರಾಥಮಿಕ ಹಂತ. ವಿದ್ಯಾರ್ಥಿ ಯಾವುದೇ ವಿಷಯದ ಮೂಲಭೂತ ಮಾಹಿತಿಯನ್ನು ನೆನಪಿನಲ್ಲಿ ಇರಿಸಿಕೊಳ್ಳುವ ಶಕ್ತಿ ಹೊಂದಿರಬೇಕು. ಉದಾಹರಣೆ :  ತಾತ್ವಿಕತೆಯ ಪಾಠದಲ್ಲಿ "ಮಾನವೀಯ ಮೌಲ್ಯಗಳು ಯಾವುವು?" ಎಂಬ ಪ್ರಶ್ನೆಗೆ ಉತ್ತರಿಸಬೇಕು. ಗಣಿತದಲ್ಲಿ ಸೂತ್ರಗಳನ್ನು ಜ್ಞಾಪಿಸಿಕೊಳ್ಳುವುದು. ಪದಗಳು, ನಿಯಮಗಳು, ಸೂತ್ರಗಳು ಮುಂತಾದ ಸ್...