Posts

Showing posts with the label Kannada ನೋಟ್ಸ್

ಕಂಪ್ಯೂಟರ್ – ಅರ್ಥ, ಇತಿಹಾಸ, ಭಾಗಗಳು ಮತ್ತು ಉಪಯೋಗಗಳು | Computer in Kannada

Image
  ಕಂಪ್ಯೂಟರ್ (Computer) ಎಂಬ ಪದವು ಇಂಗ್ಲಿಷ್‌ನ Compute ಎಂಬ ಪದದಿಂದ ಬಂದಿದೆ. Compute ಅಂದರೆ ಲೆಕ್ಕ ಹಾಕುವುದು. ಹೀಗಾಗಿ, ಕಂಪ್ಯೂಟರ್ ಎಂದರೆ ಲೆಕ್ಕ ಹಾಕುವ ಯಂತ್ರ ಎಂದು ಅರ್ಥೈಸಬಹುದು. ಆದರೆ ಇಂದಿನ ದಿನಗಳಲ್ಲಿ ಕಂಪ್ಯೂಟರ್ ಕೇವಲ ಲೆಕ್ಕ ಹಾಕುವುದಲ್ಲದೆ, ಡೇಟಾ ಸಂಗ್ರಹಿಸುವುದು, ಪ್ರಕ್ರಿಯೆಗೊಳಿಸುವುದು, ವಿಶ್ಲೇಷಿಸುವುದು, ಮಾಹಿತಿ ನೀಡುವುದು, ವಿನ್ಯಾಸ ರಚಿಸುವುದು, ಸಂವಹನ ನಡೆಸುವುದು ಸೇರಿದಂತೆ ಅನೇಕ ಕಾರ್ಯಗಳನ್ನು ವೇಗವಾಗಿ, ನಿಖರವಾಗಿ ನೆರವೇರಿಸುತ್ತದೆ. ಕಂಪ್ಯೂಟರ್ ಒಂದು ಎಲೆಕ್ಟ್ರಾನಿಕ್ ಸಾಧನ. ಇದು ವಿದ್ಯುತ್ ಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ. ಇದು GIGO (Garbage In – Garbage Out) ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಅಂದರೆ ನೀವು ಸರಿಯಾದ ಮಾಹಿತಿ ನೀಡಿದರೆ ಸರಿಯಾದ ಫಲಿತಾಂಶ ನೀಡುತ್ತದೆ, ತಪ್ಪಾದ ಮಾಹಿತಿ ನೀಡಿದರೆ ತಪ್ಪಾದ ಫಲಿತಾಂಶ ನೀಡುತ್ತದೆ. ಸರಳ ಅರ್ಥದಲ್ಲಿ : ಕಂಪ್ಯೂಟರ ಎಂದರೆ ಸರಳ ಮತ್ತು ನಿಖರವಾಗಿ ಮಾಹಿತಿಯನ್ನು ಒದಗಿಸುವುದೇ ಕಂಪ್ಯೂಟರ್ ಅಥವಾ ಗಣಕಯಂತ್ರ ಎನ್ನುವರು ಉದಾಹರಣೆ : 2+1=3  ಈ ರೀತಿಯಾಗಿ ಸರಳವಾಗಿ ಮಾಹಿತಿಯನ್ನು ನೀಡಿವುದೇ ಕಂಪ್ಯೂಟರ. ಕಂಪ್ಯೂಟರ್‌ನ ಪ್ರಮುಖ ಲಕ್ಷಣಗಳು: 1. ವೇಗ (Speed): ಅತ್ಯಂತ ವೇಗದಲ್ಲಿ ಕೆಲಸ ಮಾಡುವ ಸಾಮರ್ಥ್ಯ. 2. ನಿಖರತೆ (Accuracy): ತಪ್ಪಿಲ್ಲದ ಲೆಕ್ಕಾಚಾರ ಮತ್ತು ಪ್ರಕ್ರಿಯೆ. 3. ಸಂಗ್ರಹ ಸಾಮರ್ಥ್ಯ (Storage Capacity)...