ಉತ್ತಮ ಪರೀಕ್ಷಾ ಸಾಧನದ ಲಕ್ಷಣಗಳು
ಪರಿಚಯ ಪಾಠದ ಶ್ರೇಯೋನಿಷ್ಠೆ, ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ, ತಿಳುವಳಿಕೆಯ ಅಳತೆ ಮಾಡುವುದು ಮೊದಲಾದ ಕಾರಣಗಳಿಂದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪರೀಕ್ಷಾ ಸಾಧನ ಅಥವಾ ಪರೀಕ್ಷಾ ಉಪಕರಣವು ಅಂದರೆ ಪ್ರಶ್ನೆಪತ್ರಿಕೆ, ಪರೀಕ್ಷಾ ಮಾದರಿ ಅಥವಾ ಮೌಲ್ಯಮಾಪನ ವಿಧಾನ. ಯಾವುದೇ ಪರೀಕ್ಷಾ ಸಾಧನ ಪರಿಣಾಮಕಾರಿಯಾಗಿ ಬಳಸದಿದ್ದರೆ, ಅದಕ್ಕೆ ಕೆಲವೊಂದು ಮುಖ್ಯ ಲಕ್ಷಣಗಳು ಇರಬೇಕಾಗುತ್ತದೆ. ಇವುಗಳನ್ನು ಮನೋವಿಜ್ಞಾನಿಗಳು ಹಾಗೂ ಶಿಕ್ಷಣ ತಜ್ಞರು ವಿವರಿಸಿರುತ್ತಾರೆ. 1. ವಿಶ್ವಾಸನೀಯತೆ (Reliability) ಪರೀಕ್ಷೆಯು ಯಾವಾಗಲೂ ನಿರಂತರವಾಗಿ ಸಮಾನ ಫಲಿತಾಂಶಗಳನ್ನು ನೀಡಬಲ್ಲದು ಎಂಬ ಗುಣವೇ ವಿಶ್ವಾಸನೀಯತೆ. ಉದಾಹರಣೆ: ವಿದ್ಯಾರ್ಥಿ ಒಂದೇ ವಿಷಯದಲ್ಲಿ ಎರಡು ಬಾರಿ ಪರೀಕ್ಷೆ ಬರೆದಾಗ ಸಮಾನ ಫಲಿತಾಂಶ ಬರಬೇಕು.ಉದಾಹರಣೆ : ಒಂದು ಸ್ಕೆಲ್ ನಿಂದ ಅಳತೆ ಮಾಡಿದ ಬಟ್ಟೆ ಎರಡು ಮೀಟರ್ ಆಗಿದ್ದರೆ ಅದನ್ನು ಎಷ್ಟೇ ಜನರು ಅಳತೆ ಮಾಡಿದರೆ ಎರಡು ಮೀಟರ್ ಬಂದರೆ ಅಂತಹ ಗುಣವೇ ವಿಶ್ವಾಸನೀಯತೆ ವಾಗಿದೆ. 2. ವಸ್ತುನಿಷ್ಠತೆ (Objectivity) ವಿಚಾರಗಳ ಭಿನ್ನತೆ ಅಥವಾ ಪರಿಕ್ಷಕರ ವೈಯಕ್ತಿಕ ಅಭಿಪ್ರಾಯಗಳು ಮೌಲ್ಯಮಾಪನದ ಮೇಲೆ ಪರಿಣಾಮ ಬೀರುವಂತಿಲ್ಲ. ಉದಾಹರಣೆ: ಬಹು ಆಯ್ಕೆಯ ಪ್ರಶ್ನೆಗಳು. 3. ಸಮಂಜಸತೆ (Validity) ಪರೀಕ್ಷಾ ಸಾಧನವು ನಿರ್ಧರಿಸಿದ ವಿಷಯ, ಗುರಿಗಳನ್ನು ಮತ್ತು ವೈಖರಿಗಳನ್ನು ಪರೀಕ್ಷಿಸುತ್ತಿದೆಯೆ ಎಂಬುದನ್ನು ಹೇಳುವುದು ಸಮಂಜಸತೆ. ಉದಾಹರಣೆ: ಗ...