ಶಿಕ್ಷಕರ ಅರ್ಹತಾ ಪರೀಕ್ಷೆ (TET) ಗೆ ತಯಾರಾಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಹಳೆಯ ಪ್ರಶ್ನೆಪತ್ರಿಕೆಗಳು ಅತ್ಯಂತ ಸಹಾಯಕವಾಗುತ್ತವೆ. ಹಳೆಯ ಪ್ರಶ್ನೆಗಳನ್ನು ಅಭ್ಯಾಸ ಮಾಡುವುದರಿಂದ ಪ್ರಶ್ನೆಗಳ ಸ್ವರೂಪ, ಅಂಕಗಳ ಹಂಚಿಕೆ ಹಾಗೂ ಪರೀಕ್ಷೆಯ ಮಾದರಿಯನ್ನು ತಿಳಿದುಕೊಳ್ಳಬಹುದು. ವಿಶೇಷವಾಗಿ 2020 ರಲ್ಲಿ ನಡೆದ TET ಪ್ರಶ್ನೆಪತ್ರಿಕೆ ಇಂದು ಕೂಡ ಅಭ್ಯರ್ಥಿಗಳಿಗೆ ಮಾರ್ಗದರ್ಶಕವಾಗಿದೆ. ಪೋಸ್ಟ್‌ನಲ್ಲಿ 2020 ರ ಪ್ರಶ್ನೆಪತ್ರಿಕೆಯ ಮುಖ್ಯ ಬಹು ಆಯ್ಕೆ ಪ್ರಶ್ನೆಗಳು ಹಾಗೂ ಉತ್ತರಗಳು ನೀಡಲಾಗಿದೆ. ಪ್ರತಿಯೊಂದು ಪ್ರಶ್ನೆಯ ಕೆಳಗೆ ಉತ್ತರವನ್ನು ಪ್ರತ್ಯೇಕವಾಗಿ ನೀಡಿರುವುದರಿಂದ ಕಲಿಯುವವರಿಗೆ ಸುಲಭವಾಗಿ ಅರ್ಥವಾಗುತ್ತದೆ
ಶಿಶು ಮನೋವಿಜ್ಞಾನ ಮತ್ತು ಬೋಧನಶಾಸ್ತ್ರ 2020 ಪೇಪರ್, 1 ರ ಪ್ರಶ್ನೆ ಮತ್ತು ಉತ್ತರಗಳು :
61. ವಿಕಸನವೆಂದರೆ, ಕ್ರಮಬದ್ದವಾಗಿ ಊಹಿಸಬಹುದಾದ ವಿನ್ಯಾಸದಲ್ಲಿ ಉಂಟಾಗುವ ಹಾಗೂ ಕೆಳಗಿನ ಅಂಶಗಳಲ್ಲಿ ಪ್ರಗತಿಪರ ಸರಣೀಕೃತ ಬದಲಾವಣೆಗಳ ಫಲಿತವಾಗಿದೆ.
(1) ಬೆಳವಣಿಗೆ ಮತ್ತು ಅನುಭವ
(2) ಪರಿಪಕ್ವತೆ ಮತ್ತು ಅನುಭವ
(3) ಬೋಧನೆ ಮತ್ತು ಅನುಭವ
(4) ಬೆಳವಣಿಗೆ ಮತ್ತು ಪರಿಪಕ್ವತೆ
ಉತ್ತರ :ಬೆಳವಣಿಗೆ ಮತ್ತು ಪರಿಪಕ್ವತೆ
62. ಕೋಲ್ಸ್ ಬರ್ಗ್‌ರವರ ವ್ಯಾಖ್ಯಾನದ ಪ್ರಕಾರ ವ್ಯಕ್ತಿಯ ಈ ಪ್ರಜ್ಞೆಯ ವಿಕಸನವು ನೈತಿಕ ವಿಕಸನವಾಗುತ್ತದೆ.
(1) ಕಾರಣೀಕರಿಸುವಿಕೆ
(2) ಆಲೋಚಿಸುವಿಕೆ
(3) ನ್ಯಾಯ
(4) ತೀರ್ಮಾನಿಸುವಿಕೆ
ಉತ್ತರ :ನ್ಯಾಯ
63. “ಲಿಂಗ ಪಾತ್ರ” ಎಂಬ ಪದವನ್ನು 1955ರಲ್ಲಿ ಪ್ರಥಮ ಬಾರಿಗೆ ಬಳಸಿದವರು
(1) ಆರ್.ಡಬ್ಲ್ಯು. ಕಾನೆಲ್
(2) ವರ್ನ್ ಬುಲ್ಲೋ
(3) ಜಾನ್ ಮನಿ
(4) ಗಾಫ್‌ಮ್ಯಾನ್
ಉತ್ತರ :ಜಾನ್ ಮನಿ
64. ಸಮಕಾಲೀನ ಸಮಾಜಗಳಲ್ಲಿ ಸಾಮಾಜೀಕರಣದ ಮೂಲ ಸಂಸ್ಥೆಗಳು
A. ಕುಟುಂಬ
B. ಶಾಲೆ
C. ಸಮ ವಯಸ್ಕರು
D. ಸಮುದಾಯ
(1) (A) ಮತ್ತು (B) ಮಾತ್ರ
(3) (A), (B)ಮತ್ತು (C)
(2) (B) ಮತ್ತು (C) ಮಾತ್ರ
(4) (A), (B), (C) ಹಾಗೂ (D)
ಉತ್ತರ : (A), (B), (C) ಹಾಗೂ (D)
65. ಕೆಳಗಿನ ಯಾವುದು ಮಕ್ಕಳ ಸಂಜ್ಞಾನಾತ್ಮಕ ಕಲಿಕಾ ಶೈಲಿಯಾಗುವುದಿಲ್ಲ
(1) ಶ್ರವಣೇಂದ್ರಿಯದ ಶೈಲಿ
(2). ದೃಶ್ಯ ಆಧಾರಿತ ಶೈಲಿ
(3) ಸ್ಪರ್ಶ ಸಂಬಂಧೀ ಶೈಲಿ
(4) ಊಹಾಧಾರಿತ ಶೈಲಿ
ಉತ್ತರ :ಊಹಾಧಾರಿತ ಶೈಲಿ
66. ಈ ಕೆಳಕಂಡವುಗಳಲ್ಲಿ ಯಾವುದು ರಚನಾವಾದ ಪದ್ಧತಿ ಆಧಾರಿತ ಬೋಧನೆಯಲ್ಲ
(1) ಪರಿಕಲ್ಪನಾ ನಕ್ಷೆ
(2) ಸಾಮಾಜಿಕ-ವಿಚಾರಣಾ ವಿಧಾನ
(3) ಉಪನ್ಯಾಸ-ಪ್ರಾತ್ಯಕ್ಷಿಕೆ ವಿಧಾನ
(4) ಸಹಕಾರ ಕಲಿಕಾ ತಂತ್ರಗಳು
ಉತ್ತರ :ಉಪನ್ಯಾಸ-ಪ್ರಾತ್ಯಕ್ಷಿಕೆ ವಿಧಾನ
67. ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಯನ್ನು 1974ರಲ್ಲಿ ಈ ಕೆಳಗಿನ ಕಾರ್ಯಕ್ರಮವನ್ನು ಪ್ರಾರಂಭಿಸುವುದರೊಂದಿಗೆ ಸಾಧಿಸಲಾಯಿತು
(1) ಯೋಜನೆ ಸಂಘಟಿತ ಶಿಕ್ಷಣ ಅಭಿವೃದ್ಧಿ (PIED)
(2) ಸರ್ವರಿಗೂ ಶಿಕ್ಷಣ [EFA]
(3) ನ್ಯೂನತೆ ಹೊಂದಿರುವ ಮಗುವಿಗೆ ಸಮಗ್ರ ಶಿಕ್ಷಣ (IEDC)
(4) ಜಿಲ್ಲಾ ಪುನರ್‌ವಸತಿ ಕೇಂದ್ರ ಕಾರ್ಯಕ್ರಮ (DRCS)
ಉತ್ತರ :ನ್ಯೂನತೆ ಹೊಂದಿರುವ ಮಗುವಿಗೆ ಸಮಗ್ರ ಶಿಕ್ಷಣ (IEDC)
68. ಉದಾಹರಣೆಗಳಿಂದ ನಿಯಮದೆಡೆಗೆ ಸಾಗುವ ಕಾರಣೀಕರಿಸುವ ಪ್ರಕ್ರಿಯೆಯನ್ನು ಹೀಗೆಂದು ಕರೆಯುತ್ತಾರೆ
(1) ವಿಶ್ಲೇಷಣೆ
(2) ಸಂಶ್ಲೇಷಣೆ
(3) ಅನುಗಮನ
(4) ನಿಗಮನ
ಉತ್ತರ :ಅನುಗಮನ
69. ಜೀನ್ ಪಿಯಾಜೆಯವರ ಪ್ರಕಾರ, ಬಾಲ್ಯಾವಸ್ಥೆಯ ಪ್ರಮುಖವಾದ ಸಂಜ್ಞಾನಾತ್ಮಕ ವಿಕಸನವು ಇದನ್ನು ಬೆಳೆಸುತ್ತದೆ
(1) ಜ್ಞಾನ
(2) ಬೌದ್ಧಿಕ ಕೌಶಲ್ಯಗಳು
(3) ಸಂಜ್ಞಾನಾತ್ಮಕ ತಂತ್ರಗಳು
(4) ಪರಿಕಲ್ಪನೆ
ಉತ್ತರ :ಪರಿಕಲ್ಪನೆ
70. ತರಗತಿಯಲ್ಲಿ ರೂಪಣಾತ್ಮಕ ಮೌಲ್ಯಾಂಕನದ ಕಾರ್ಯವೆಂದರೆ
(1) ವಿದ್ಯಾರ್ಥಿಯ ನಿಯೋಜಿತ ಕಾರ್ಯಕ್ಕೆ ಅಂಕಗಳನ್ನು ನಿಗದಿಪಡಿಸುವುದು
(2) ವಿದ್ಯಾರ್ಥಿಯ ವರ್ತನೆಯ ಬಗ್ಗೆ ತೀರ್ಮಾನ ಮಾಡುವುದು
(3) ವಿದ್ಯಾರ್ಥಿಯ ಸಾಧನೆಯ ಮಾಪನ ನಿಖರವಾಗಿ ಮಾಡುವುದು
(4) ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಿಮ್ಮಾಹಿತಿ ಒದಗಿಸುವುದು
ಉತ್ತರ :ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಿಮ್ಮಾಹಿತಿ ಒದಗಿಸುವುದು
71. ಪ್ರಾಸಬದ್ಧ ವಿನ್ಯಾಸಗಳನ್ನು ಪುನರುತ್ಪಾದಿಸುವಲ್ಲಿ ಒಬ್ಬ ವಿದ್ಯಾರ್ಥಿಗೆ ತೊಂದರೆಯಿದೆ ಎಂದಾಗ ಈ ಅಂಶಕ್ಕೆ ಸಂಬಂಧಿಸಿದ ಕಲಿಕಾ ನ್ಯೂನತೆ ಹೊಂದಿರುತ್ತಾರೆ
(1) ಭಾಷೆ
(2) ಸ್ಮೃತಿ
(3) ಅವಧಾನ ಅಸ್ವಸ್ಥತೆ
(4) ಗ್ರಹಿಕೆ ಅಸ್ವಸ್ಥತೆ
ಉತ್ತರ :ಗ್ರಹಿಕೆ ಅಸ್ವಸ್ಥತೆ
72. ಕಲಿಕೆಯ ಕಾರ್ಯಗಳನ್ನು ರೂಪಿಸುವಾಗ ರಚನಾತ್ಮಕ ಶಿಕ್ಷಕರು ಈ ಸಂಜ್ಞಾನಾತ್ಮಕ ಪರಿಭಾಷೆಯನ್ನು ಬಳಸುತ್ತಾರೆ
(1) ಗುರ್ತಿಸುವರು
(2) ವರ್ಣಿಸುವರು
(3) ವಿಶ್ಲೇಷಿಸುವರು
(4) ವಾಚಿಸುವರು
ಉತ್ತರ :ವಿಶ್ಲೇಷಿಸುವರು
73. ಕೆಳಗಿನ ಯಾವ ಕಾರ್ಯಗಳು ಸಾಂಸ್ಕೃತಿಕವಾಗಿ ಸಂಘಟನೆಯಾಗುವ ವಿಕಸನ ಪ್ರಕ್ರಿಯೆಯಲ್ಲಿ ಕಲಿಕೆಯು ಒಂದು ಅವಶ್ಯಕ ಮತ್ತು ಸಾರ್ವತ್ರಿಕ ಅಂಶವಾಗಿದೆಯೆಂದು ವೈಗಾಸ್ಕಿಯವರು ಹೇಳುತ್ತಾರೆ
(1) ಸಾಮಾಜಿಕ ಕಾರ್ಯಗಳು
(2) ಮನೋವೈಜ್ಞಾನಿಕ ಕಾರ್ಯಗಳು
(3) ಸಾಂಸ್ಕೃತಿಕ ಕಾರ್ಯಗಳು
(4) ದೈಹಿಕ ಕಾರ್ಯಗಳು
ಉತ್ತರ :ಮನೋವೈಜ್ಞಾನಿಕ ಕಾರ್ಯಗಳು
74. ಕಲಿಕೆಯ ಪ್ರಕ್ರಿಯೆಯನ್ನು ಗಣಿತೀಯವಾಗಿ ಈ ರೀತಿ ವ್ಯಕ್ತಪಡಿಸಲಾಗಿದೆ
(1) ಅನುವಂಶೀಯತೆ • ಪರಿಸರ
(2) ಜೀವಿ x ಅನುವಂಶೀಯತೆ
(3) ಜೀವಿ • ಪರಿಸರ
(4) ಜೀವಿ x ವರ್ತನೆ
ಉತ್ತರ :ಜೀವಿ • ಪರಿಸರ
75. ವೈಗಾಸ್ಕಿಯವರ ವಾದದ ಪ್ರಕಾರ ಮಾನವರಲ್ಲಿ ಉಂಟಾಗುವ ಅನುಭವದ ಪ್ರತಿಫಲನೆ ಮತ್ತು ವಿಸ್ತರಣೆಯ ಮಾಧ್ಯಮವು
(1) ಆಲೋಚನೆ
(2) ಸಾಮಾಜೀಕರಣ
(3) ಬುದ್ದಿವಂತಿಕೆ
(4) ಭಾಷೆ
ಉತ್ತರ :ಭಾಷೆ
76. ಒಂದು ಸಾಧನೆ ಪರೀಕ್ಷೆ ಕೆಳಗಿನವುಗಳಲ್ಲಿ ಯಾವುದನ್ನು ಮಾಪನ ಮಾಡುವುದಿಲ್ಲ
(1) ಜ್ಞಾನ
(3) ಕೌಶಲ್ಯಗಳು
(2) ತಿಳುವಳಿಕೆ
(4) ಮನೋಭಾವನೆ
ಉತ್ತರ :ಮನೋಭಾವನೆ
77. ತರಗತಿಯಲ್ಲಿ ಶಿಕ್ಷಕರು ಬಳಸುವ ಉದ್ದೀಪನ ಬದಲಾವಣೆಯು ಕೆಳಗಿನ ಯಾವುದರ ತಂತ್ರವಾಗಿದೆ
(1) ಅಭಿಪ್ರೇರಣೆಯನ್ನು ವರ್ಧಿಸುವುದು
(2) ಕುತೂಹಲವನ್ನು ಕೆರಳಿಸುವುದು
(3) ಆಸಕ್ತಿಯನ್ನು ಸೃಷ್ಟಿಸುವುದು
(4) ಗುರಿಯನ್ನು ನಿರ್ದೇಶಿಸುವುದು
ಉತ್ತರ :ಆಸಕ್ತಿಯನ್ನು ಸೃಷ್ಟಿಸುವುದು
78. ಬಹುವಿಧ ಬುದ್ದಿಶಕ್ತಿಯು ಬಹುವಿಧ ವ್ಯಕ್ತಿಗಳಲ್ಲಿ ಬೆಳವಣಿಗೆ ಮತ್ತು ವಿಕಸನಗೊಳ್ಳುವಾಗ, ಹೊವರ್ಡ್ ಗಾರ್ಡನರ್‌ರವರ ಪ್ರಕಾರ ಈ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ
(1) ಅನುವಂಶೀಯ ಲಕ್ಷಣಗಳು
(2) ಪರಿಸರದ ಅನುಭವಗಳು
(3) ಅನುವಂಶೀಯ ಲಕ್ಷಣಗಳು ಮತ್ತು ಪರಿಸರದ ಅನುಭವಗಳು
(4) ಮಾನಸಿಕ ಸಾಮರ್ಥ್ಯಗಳು
ಉತ್ತರ :ಅನುವಂಶೀಯ ಲಕ್ಷಣಗಳು ಮತ್ತು ಪರಿಸರದ ಅನುಭವಗಳು
79. ಈ ಕೆಳಗಿನ ಯಾವುದನ್ನು ಮಾಪನ ಮಾಡಲು ಪ್ರಮಾಣಕ ಆಧಾರಿತ ಪರೀಕ್ಷೆಗಳನ್ನು ಬಳಸಬಹುದು
(1) ಸಾಧನೆ
(2) ಗಳಿಕೆ
(3) ಅಭಿಕ್ಷಮತೆ,
(4) ಆಸಕ್ತಿ
ಉತ್ತರ :ಅಭಿಕ್ಷಮತೆ
80. ಪೂರ್ವೋತ್ತರ - ಸಂಪ್ರದಾಯಬದ್ಧ ಹಂತದಲ್ಲಿ ಮಕ್ಕಳ ನೈತಿಕ ತೀರ್ಪುಗಳು ಕೆಳಗಿನ ಯಾವ ಸಾರ್ವತ್ರಿಕ ತತ್ವಗಳಲ್ಲಿರುವ ನಂಬಿಕೆಯ ಮೇಲೆ ಆಧಾರವಾಗಿರುತ್ತವೆ
(1) ಗೌರವ, ನ್ಯಾಯ ಮತ್ತು ಸಮತೆ
(2) ನ್ಯಾಯ, ಸಮತೆ ಮತ್ತು ನಿಯಮಗಳು
(3) ನಿಯಮಗಳು, ನಿಬಂಧನೆಗಳು ಮತ್ತು ನ್ಯಾಯ
(4) ನ್ಯಾಯ, ಉಪಯುಕ್ತತೆ ಮತ್ತು ಆಸಕ್ತಿ
ಉತ್ತರ :ಗೌರವ, ನ್ಯಾಯ ಮತ್ತು ಸಮತೆ
81. ಈ ಕೆಳಗೆ ಕೊಟ್ಟಿರುವ ಯಾವ ಬೆಳವಣಿಗೆಯ ಅವಧಿಯಲ್ಲಿರುವ ಮಕ್ಕಳ ಮೇಲೆ ಸಮ ವಯಸ್ಕರ ಪ್ರಭಾವ ಅತ್ಯಂತ ಶಕ್ತಿಶಾಲಿಯಾಗಿರುತ್ತದೆ
(1) ಪೂರ್ವ ಬಾಲ್ಯಾವಸ್ಥೆಯ ಅವಧಿ
(3) ಕಿಶೋರಾವಸ್ಥೆ ಅವಧಿ
(2) ಉತ್ತರ ಬಾಲ್ಯಾವಸ್ಥೆಯ ಅವಧಿ
(4) ಮೇಲಿನ ಎಲ್ಲಾ ಅವಧಿಗಳು
ಉತ್ತರ :ಕಿಶೋರಾವಸ್ಥೆ ಅವಧಿ
82. ಈ ಕೆಳಗಿನವುಗಳಲ್ಲಿ ಯಾವುದು ವಿಶೇಷ ಅಗತ್ಯವುಳ್ಳ ಮಕ್ಕಳ ನಿರ್ದಿಷ್ಟವಾದ ಪ್ರಮುಖ ವಿಷಯವಲ್ಲ
(1) ವೈದ್ಯಕೀಯ ವಿಷಯಗಳು
(2) ಕಲಿಕಾ ವಿಷಯಗಳು
(3) ಸಾಮಾಜಿಕ ವಿಷಯಗಳು
(4) ವಿಕಸನಾತ್ಮಕ ವಿಷಯಗಳು
ಉತ್ತರ :ಕಲಿಕಾ ವಿಷಯಗಳು
83. ಅವಧಾನವು ಕೇವಲ ಸಂಜ್ಞಾನಾತ್ಮಕ ಉತ್ಪನ್ನವಲ್ಲ, ಆದರೆ ಇವುಗಳಿಂದ ಅವಶ್ಯಕವಾಗಿ ನಿರ್ಣಯವಾಗುತ್ತದೆ
(1) ವಯಸ್ಸು ಮತ್ತು ಪಕ್ವತೆ.
(2) ಪಕ್ವತೆ ಮತ್ತು ಆಸಕ್ತಿ
(3) ಮನೋಭಾವನೆ ಮತ್ತು ಬುದ್ಧಿಶಕ್ತಿ
(4) ಆಸಕ್ತಿ ಮತ್ತು ಮನೋಭಾವನೆ
ಉತ್ತರ :ಆಸಕ್ತಿ ಮತ್ತು ಮನೋಭಾವನೆ
84. ಹೆಚ್ಚಿನ ಸಂಖ್ಯೆಯಲ್ಲಿ, ಅಂದರೆ ಸುಮಾರು 60% ಶಾಲಾ ಮಕ್ಕಳು ತಮ್ಮ ಹೊಂದಿರುವ ವ್ಯಾಪ್ತಿ
(1) 70-100
(2) 80-110
(3) 90-100
(4) 90-110
ಉತ್ತರ :90-110
85. ಮಗುವು ಇತರರಿಂದ ಪ್ರಭಾವಿತವಾಗುವ ನಿರಂತರ ಪ್ರಕ್ರಿಯೆಯಲ್ಲಿ ಪೋಷಕರು ಅತ್ಯಂತ ಪ್ರಧಾನ ಪಾತ್ರ ವಹಿಸುವುದನ್ನು ಹೀಗೆನ್ನುತ್ತಾರೆ.
(1) ಪೋಷಕತ್ವ
(2) ಸಾಮಾಜೀಕರಣ
(3) ವಿಕಸನ
(4) ಬೆಳವಣಿಗೆ
ಉತ್ತರ :ಸಾಮಾಜೀಕರಣ
86. ಕಲ್ಲಿಕಾಕ್‌ರವರ ಕುಟುಂಬದ ಮೇಲೆ ಹೆಚ್.ಹೆಚ್. ಗೊಡ್ಡಾರ್ಡ್ ನಡೆಸಿದ ಅಧ್ಯಯನವು ಈ ಅಂತ/ಗಳು ವೈಯಕ್ತಿಕ ವ್ಯತ್ಯಾಸಗಳನ್ನು ನಿರ್ಧರಿಸುತ್ತದೆ/ವೆ ಎಂಬುದನ್ನು ತೋರಿಸಿಕೊಟ್ಟಿದೆ
(1) ಅನುವಂಶೀಯತೆ
(2) ಪರಿಸರ
(3) ಅನುವಂಶೀಯತೆ ಮತ್ತು ಪರಿಸರ
(4) ಅನುವಂಶೀಯತೆಯೂ ಅಲ್ಲ, ಪರಿಸರವೂ ಅಲ್ಲ
ಉತ್ತರ :ಅನುವಂಶೀಯತೆ
87. ಈ ಕೆಳಗಿನವುಗಳಲ್ಲಿ ಯಾವುದು ಸಂವೇಗಾತ್ಮಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಅಂಶವಲ್ಲ
(1) ಬುದ್ಧಿಶಕ್ತಿ
(2) ಆಸಕ್ತಿ
(3) ಶಾಲಾ ಪರಿಸರ
(4) ಸಮ ವಯಸ್ಕರು
ಉತ್ತರ :ಆಸಕ್ತಿ
88. ಯಥಾರ್ಥ ವಿಕಸನದ ಮಟ್ಟ ಮತ್ತು ಅಂತಸ್ಸತ್ವ ವಿಕಸನದ ಮಟ್ಟದ ನಡುವಿನ ಅಂತರವನ್ನು ಹೀಗೆನ್ನುತ್ತಾರೆ
(1) ಬೌದ್ಧಿಕ ವಿಕಸನದ ವಲಯ
(2) ಸಾಮಾಜಿಕ ವಿಕಸನದ ವಲಯ
(3) ಸಾಮೀಪ್ಯ ವಿಕಸನದ ವಲಯ
(4) ಸಂಜ್ಞಾನಾತ್ಮಕ ವಿಕಸನದ ವಲಯ
ಉತ್ತರ :ಸಾಮೀಪ್ಯ ವಿಕಸನದ ವಲಯ
89. ನಿರರ್ಗಳತೆ, ನಮ್ಯತೆ ಮತ್ತು ವಿಸ್ತರಣೆ ಇವೆಲ್ಲವೂ ಸೃಜನಶೀಲ ಸಾಮರ್ಥ್ಯಗಳ ವಿಶಿಷ್ಟ ಅಂಶಗಳು. ಇದನ್ನು ಹೇಳಿದವರು
(1) ಸ್ಕಿನ್ನರ್
(2) ಜಂಗ್
(3) ರಾಬರ್ಟ್ ಗ್ಯಾನೆ
(4) ಗಿಲ್ಪರ್ಡ್
ಉತ್ತರ :ಗಿಲ್ಪರ್ಡ್
90. ಬ್ರೂನರ್‌ರವರ ಸಂಶೋಧನಾ ಪದ್ಧತಿ ಆಧಾರವಾಗಿರುವ ಮನೋವೈಜ್ಞಾನಿಕ ತತ್ವ
(1) ವೀಕ್ಷಣೆಯ ಮೂಲಕ ಕಲಿಕೆ
(2) ಅನುಬಂಧಿತ ಕಲಿಕೆ
(3) ಮಾಡುವ ಮೂಲಕ ಕಲಿಕೆ
(4) ಅನುಕರಣೆಯ ಮೂಲಕ ಕಲಿಕೆ
ಉತ್ತರ :ಮಾಡುವ ಮೂಲಕ ಕಲಿಕೆ
ವಿ ಸೂಚನೆ : ಇದರಲ್ಲಿ ಪೇಪರ್ 01 ರಲ್ಲಿ 2020 ರ ಶಿಶು ಮನೋವಿಜ್ಞಾನ ಮತ್ತು ಬೋಧನಶಾಸ್ತ್ರ ಪ್ರಮುಖ ವಾಗಿದ್ದು ಇದರಲ್ಲಿ ಏನಾದರು ತಪ್ಪು ಉತ್ತರಗಳು ಕಂಡು ಬಂದರೆ ಕಾಮೆಂಟ್ ಮೂಲಕ ತಿಳಿಸಿ ಮತ್ತು ಈ ಪೇಜ್ ಜಿಮೈಲ್ ಮೂಲಕ ಫಾಲೋ ಮೂಲಕ ಕಾಮೆಂಟ್ ಮಾಡಬಹುದು.

0 comments:
Post a Comment