TET / CTET ಮನೋವಿಜ್ಞಾನದ ಪಂಥಗಳು ಸಂಪೂರ್ಣ ಮಾಹಿತಿ | Schools of Psychology for CDP 2026
ಟೆಟ್ / CTET ಗಾಗಿ ಸಂಪೂರ್ಣ ಮನೋವಿಜ್ಞಾನದ ಪಂಥಗಳು (Schools of Psychology) – ವಿಸ್ತೃತ ಅಧ್ಯಯನ ಶಿಕ್ಷಕರ ಅರ್ಹತಾ ಪರೀಕ್ಷೆಗಳಾದ TET ಮತ್ತು CTETಗಳಲ್ಲಿ Child Development and Pedagogy (CDP) ವಿಭಾಗ ಅತ್ಯಂತ ಪ್ರಮುಖವಾಗಿದೆ. ಈ ವಿಭಾಗದಲ್ಲಿ ಮನೋವಿಜ್ಞಾನದ ವಿವಿಧ ಪಂಥಗಳ ಬಗ್ಗೆ ನೇರ ಪ್ರಶ್ನೆಗಳು ಕೇಳಲಾಗುತ್ತದೆ. “ಯಾರು ಪ್ರತಿಪಾದಕ?”, “ಯಾವ ತತ್ವ?”, “ಯಾವ ಹಂತ?”, “ಯಾವ ವಿಧಾನ?” ಎಂಬ ಪ್ರಶ್ನೆಗಳು ನಿರಂತರವಾಗಿ ಬರುತ್ತವೆ. ಆದ್ದರಿಂದ ಪ್ರತಿಯೊಂದು ಪಂಥದ ಮೂಲಭೂತ ತತ್ವ, ಪ್ರಮುಖ ಪ್ರತಿಪಾದಕರು, ತರಗತಿಯಲ್ಲಿ ಉಪಯೋಗ ಮತ್ತು ವಿಮರ್ಶೆಗಳನ್ನು ತಿಳಿದುಕೊಳ್ಳುವುದು ಅಗತ್ಯ. 1) ರಚನಾವಾದ (Structuralism) ಪ್ರತಿಪಾದಕ: Wilhelm Wundt 1879ರಲ್ಲಿ ಜರ್ಮನಿಯ ಲೈಪ್ಸಿಗ್ ವಿಶ್ವವಿದ್ಯಾಲಯದಲ್ಲಿ ಮೊದಲ ಮನೋವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಿದರು. ಅವರನ್ನು “ಆಧುನಿಕ ಮನೋವಿಜ್ಞಾನದ ಪಿತಾಮಹ” ಎಂದು ಕರೆಯುತ್ತಾರೆ. 💬 Join our WhatsApp Group ಮುಖ್ಯ ತತ್ವ: ಮನಸ್ಸಿನ ರಚನೆಯನ್ನು ಸಣ್ಣ ಘಟಕಗಳಾಗಿ ವಿಭಜಿಸಿ ಅಧ್ಯಯನ. ವಿಧಾನ: ಅಂತಾರಾವಲೋಕನ (Introspection) ತರಗತಿ ಉಪಯೋಗ: ವಿದ್ಯಾರ್ಥಿಗಳ ಆಂತರಿಕ ಭಾವನೆಗಳನ್ನು ಕೇಳುವುದು. ಸೀಮಿತತೆ: ವೈಯಕ್ತಿಕ ಅನುಭವಗಳು ಎಲ್ಲರಿಗೂ ಒಂದೇ ಆಗುವುದಿಲ್ಲ. ಪರೀಕ್ಷಾ ಪಾಯಿಂಟ್: Structuralism = Introspection 2)...